Sunday 6 December, 2009

kannadaacinema

Kannada cinema:
                  'ಸಿನಿಮಾ'...ಅಂದತಕ್ಷಣ ನೆನಪಿಗೆ ಬರೋದು ಒಂದು ಬಣ್ಣದ ಲೋಕ! ಇಲ್ಲದ್ದನ್ನು ಇದ್ದಂತೆ ತೋರಬಲ್ಲ ಮಾಯಾ ಲೋಕ! ಅಲ್ಲಿಯ ಸುದ್ದಿಗಳೂ ಹಾಗೇನೆ ಎಲ್ಲರ ಮನ ಸೆಳೆಯುತ್ತೆ.  ಇದಕ್ಕೆ ಪ್ರತ್ಯೇಕವಾದ ಜನವರ್ಗವಿಲ್ಲ ಅಜ್ಜ ಅಜ್ಜಿಯಿಂದ ಹಿಡಿದು ಮೊಮ್ಮಕ್ಕಳ ವರೆಗೂ ಎಲ್ಲರ ಮೆಚ್ಚಿನ ಚರ್ಚಾವಸ್ತು ಈ 'ಚಿತ್ರರಂಗ'. ಭಾರತೀಯ ಚಲನಚಿತ್ರರಂಗದ ಇತಿಹಾಸದಲ್ಲಿ ಸಹಸ್ರ ಸಹಸ್ರ ಚಲನಚಿತ್ರಗಳು ತಯಾರಾಗಿವೆ, ತಯಾರಾಗುತ್ತಿವೆ, ಮುಂದೆಯೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೆ. ಹೀಗೆ ತಯಾರಾಗುವ ಚಿತ್ರಗಳಲ್ಲಿ ಗೆದ್ದು ಹಣ ತಂದುಕೊಟ್ಟು ಕಲಾವಿದರಿಗೆ, ಶ್ರಮಿಸಿದ ಎಲ್ಲ ಜನರಿಗೆ ಬದುಕು ಕಲ್ಪಿಸಿಕೊಟ್ಟ ಚಿತ್ರಗಳದೆಷ್ಟೋ..ಹಾಗೇ ಕಷ್ಟ ಪಟ್ಟು ಕೆಲಸ ಮಾಡಿ ತಯಾರಿಸಿದ ಚಿತ್ರಗಳು ಕೊನೆಗೆ ನಾನಾಕಾರಣಗಳಿಂದ ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡಿರುವ ಸಂಖ್ಯೆ ಇನ್ನೆಷ್ಟೋ...

                   ಇಂಥಾ ಭಾರತದ ಹತ್ತು ಹಲವು ಭಾಷೆಗಳ ಸಿನೆಮರಂಗಗಳಲ್ಲಿ ಒಂದೆನಿಸಿಕೊಂಡಿರುವ, ಕಪ್ಪು ಬಿಳುಪು ಕಾಲದಲ್ಲಿ 'ರಾಜಯೋಗ' ವನ್ನನುಭವಿಸಿದ  ಇಂದು ಯಾರಿಗೂ ಬೇಡವಾಗಿ ಕಸದ ತೊಟ್ಟಿಯಲ್ಲಿ ಹಳಸಿದ, ಕೊಳೆತ ವಸ್ತುಗಳ ನಡುವೆ ಮಲಗಿರುವ ನಾಯಿಮರಿಯನ್ತಾಗಿರುವ ನಮ್ಮ 'ಕನ್ನಡ' ಚಿತ್ರರಂಗವೋ ಸಹ ಒಂದು.

                            ಯೀಗಿನ ಯಾವ ಚಿತ್ರವನ್ನು ತೆಗೆದುಕೊಂದರೋ..ಬೇರೆ ಭಾಷೆಯ ಯಾವುದಾದರೊಂದು ಚಿತ್ರದ ನೆರಳು ಕಾಣುತ್ತದೆ. ಇತ್ತೀಚಿಗೆ ಒಂದು ಐದು ಆರು ವರ್ಷದ ಕೆಳಗಿನ ಮಾತೆಂದರೆ- ಐದು ತಮಿಳು ಚಿತ್ರಗಳು, ಎರಡು ತೆಲುಗು ಚಿತ್ರಗಳು ಹಾಗು ಒಂದೆರಡು ಮಲೆಯಾಳಂ ಚಿತ್ರಗಳ ದೃಶ್ಯಗಳು ಸೇರಿದರೆ ಒಂದು (ಅ)ಪರಿಪೂರ್ಣ ಚಿತ್ರ ತಯಾರಾಗುತ್ತಿತ್ತು. ಹೀಗೆ ಮಾಡಿ ನಮ್ಮ ನಿರ್ಮಾಪಕರು ನಿರ್ದೇಶಕರು ದಕ್ಷಿಣ ಭಾರತದ ಭಾಷೆಗಳ 'ಒಗ್ಗಟ್ಟಿ'ಗೆ ಕಾರಣವಾಗಿದ್ದರು!

                            ಅದಾದನಂತರ ಸ್ವಲ್ಪ ಚಿತ್ರರಂಗದ ದಿಕ್ಕು ಬದಲಾಗುತ್ತಾ ಬಂದಿತು. 'ಮಳೆ'ಯನ್ನು ಬಹುಚೆನ್ನಾಗಿ ಅನುಭವಿಸಿದರು. ಇನ್ನೊಂದು ಮುಖ್ಯ ಅಂಶ ನಮ್ಮ ಕಣ್ಣಿಗೆ ರಾಚುವುದೆಂದರೆ ಎಲ್ಲ ಚಿತ್ರಗಳ ಮುಖ್ಯ ವಸ್ತು ಅಂದ್ರೆ 'ಲವ್ ಸ್ಟೋರಿ'. ಹುಡುಗ ಹುಡುಗಿ ಪ್ರೀತಿ ಮಾಡೋದನ್ನ ಚಿತ್ರೀಕರಿಸಿ; ಇದೊಂದು ಕುಟುಂಬ ವೀಕ್ಷಣೆಗೆ ಅರ್ಹವಾದ ಚಿತ್ರ! ಯಾವ ಅಶ್ಲೀಲ ವಿಷಯಗಳಿಲ್ಲ ಎಂದು ವ್ಯಖ್ಯಾನಿಸೋದು. ಆ ಚಿತ್ರ ವರ್ಷ ಕಳೆದರೂ ಬಿಡುಗಡೆ ಭಾಗ್ಯ ಕಾಣದಿರುವುದು, ಚಿತ್ರದ ಚರ್ಚೆ ಇತಿಹಾಸ ಸೇರಿದ ಮೇಲೆ ಚಿತ್ರಮದಿರಕ್ಕೆ ಬರುವುದು, ವಾರಕ್ಕೆ ಮೊದಲೇ ಎತ್ತಂಗಡಿಯಾಗುವುದು.. ಇದು ನಮ್ಮ ಕನ್ನಡ ಚಿತ್ರಗಳ ಒಂದದು ಟ್ರೆಂಡ್.

                             ಎರಡನೆಯದಾಗಿ ನಮ್ಮ ಚಿತ್ರರಂಗದ 'ದೊಡ್ಡ ಕುಳ' ಎನಿಸಿಕೊಂಡಿರುವವರೆಲ್ಲರೂ 'ರೀಮೇಕ್' ಮೋಡಿಗೆ ಒಳಗಾಗಿರುವುದು. ರೀಮೇಕ್ ಪರಮಾವಧಿ ಎಂದರೆ ಬೇರೆ ಭಾಷೆಯ ಎಥಾವತ್ ದೃಶ್ಯಗಳು, ಬಣ್ಣಗಳು, ಬಟ್ಟೆಗಳು ಕನ್ನಡದ ಚಿತ್ರದಲ್ಲಿ ಹಾಕುವುದು. ಇನ್ನೋದರ್ಥದಲ್ಲಿ 'xerox copy' ಎಂದೇ ಹೇಳಬಹುದು. ವಿಪರ್ಯಾಸವೆಂದರೆ ರೀಮೇಕ್ ಮಾದಲಿಚ್ಚಿಸುವ ಚಿತ್ರಗಳು ಕಡ್ಡಾಯವಾಗಿ ಬೇರೆ ಭಾಷೆಯಲ್ಲಿ ಕನಿಷ್ಠ ಒಂದೈವತ್ತರಿಂದ ಅರವತ್ತು ವರ್ಷಗಳಷ್ಟು ಹಳೆಯದ್ದಗಿರಬೇಕೆಂದು. ನಂತರದ ದಿನಗಳಲ್ಲಿ ಅದು work out ಆಗದ ಕಾರಣ ಹೊಸ ಚಿತ್ರಗಲನೆ ಕಡಿಯಲು ಪ್ರಾರಂಭಿಸಿದರು. ಇನ್ನು 3ನೆಯದಾಗಿ ಅ(ನ)ನುಭವೀ ಚಿತ್ರತಯಾರಕರ ದಾಳಿ..!
ಕೆಲ ತಿಂಗಳ ಹಿಂದೆ ಕನ್ನದದೊಂದು ವಾಹಿನಿಯಲ್ಲಿ ಒಂದು ಚಿತ್ರವಾರ್ಥೆ ಬಿತ್ತರಗೊಂಡಿತ್ತು. ಆ ಚಿತ್ರದ ಹೆಸರು ಬೇಡ. ಅದರ ನಿರ್ಮಾಪಕರು ಬೃಹತ್ ಬೆಂಗಳೂರಿನ ಸಿಟಿ ಮಾರ್ಕೆಟ್ನಲ್ಲಿ ಒಂದು ವರ್ಷ ಬಾಳೆಹಣ್ಣಿನ ಮಂದಿ ವ್ಯಾಪಾರ ಮಾಡಿದ ಅನುಭವದದಿಂದ ಚಿತ್ರನಿರ್ಮಾಣ ಮಾಡೋಕೆ ಬಂದರಂತೆ!. ಅದರ ನಾಯಕ ಆ ನಿರ್ಮಾಪಕರ ಮಗರಾಯನೆ.. ಅವನಿಗೆ ಸ್ನಾನ ಎಂಬ ಪದದ ಪರಿಚಯವೂ ಇಲ್ಲದ ಹಾಗೆ ಕಾಣುತ್ತೆ..ಹೀಗೆ ಗಗನಕುಸುಮವಾಗಿದ್ದ ಚಿತ್ರಗಳು ಈಗ ಬಡವರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗಿವೆ..!!

                                ಅಲ್ಲರೀ ರೀಮೇಕ್ ಇರ್ಬೇಕು..ಎಷ್ಟು? ಊಟದ ಜೊತೆ ಉಪ್ಪಿನಕಾಯಿಯಂತೆ. ನಾಲ್ಕು ಸ್ವಂತ ಚಿತ್ರಗಳಲ್ಲಿ ಒಂದು ರೀಮೇಕ್. ಅದೂ ರೀಮೇಕ್ ಅಂದ್ರೆ ಹೇಗಿರಬೇಕು? ನಮ್ಮೆ ಇಲ್ಲಿಯ ಸಂಸ್ಕುತಿಗೆ ಅಪರೂಪದ್ದಗಿರಬೇಕು.ಅಥವಾ ನಮ್ಮ ಚಿತ್ರರಂಗಕ್ಕೆ ಎಲ್ಲರೀತಿಯಿಂದಲೂ ಸವಾಲಾಗಿರಬೇಕು.. ಆದ್ರೆ ಈಗಿನ ಚಿತ್ರಗಲೆನಗಿವೆ? ತೆಲುಗಿನಲ್ಲಿ ಯಾವುದೋ ಜಸ್ಟ್ ಪಾಸ್ ಆಗಿರೋದನ್ನ ತಂದು ಇಲ್ಲಿ ರೀಮೇಕ್ ಮಾಡೋದು. ಅಲ್ಲಿ ಅವ್ರು ಅದನ್ನ ಮಾಡಿದ್ರೆ ಅದನ್ನೇ ಇಲ್ಲಿ ನಕಲಿ ಮಾಡೋದು. ದಡ್ಡತನದ ಪರಮಾವಧಿ ಅಂದ್ರೆ ಕನ್ನಡದಲ್ಲಿ ಯಾವುದೋ ಒಂದು ಕಪ್ಪು ಬಿಳುಪು ಚಿತ್ರಾಧರಿತವಾದ ಒಂದು ಬೇರೆ ಭಾಷೆಯ ಚಿತ್ರವನ್ನು ಅದರ ರೀಮೇಕ್ ರೈಟ್ಸ್ ಪಡೆದು ಅದನ್ನ ಕನ್ನಡಲ್ಲೇ ಮತ್ತೆ ಮಾಡೋದು.! ಇಂಥ ಬುದ್ಧಿವಂತ ಜನ ಈ ನಮ್ಮ ಚಿತ್ರತಯಾರಕರು.
     
                                 ಹೀಗೇ ಮುಂದುವರೆದರೆ ನಮ್ಮ ಚಿತ್ರರಂಗದ ಗತಿ ಏನು? ಚಿತ್ರರಂಗ ಉಳಿಯುವುದೇ?